ಮೌನವೇ ಉತ್ತರ

boreas-1903.jpg!Large
Boreas by John William Waterhouse
ಚಿಮ್ಮ್ಯಾಳೆ ಚೆಲುವ….!
ಮೆರೆದಾಳೇ ರೂಪ…!
ಕಾಡ್ಯಾಳೆ ದನಿಯಾಗಿ…..!
ಕುಣಿದುದು ನಾ ನವಿಲಾಗಿ…!,
ಮೂಡಣದಾಗೆ ನನ್ನವಳ್ಹಾಂಗೆ ಚೆಲುವೊಂದು ಚಿಮ್ಮೈತೆ,
ಬಾನಗಲದಾಗೆ ಮಿಂಚಿನ್ಹಾಂಗೆ ನನ್ನವಳ ರೂಪ ಮೆರೆದೈತೆ,
ಗುಡುಗಿನ ಮೇಳದಾಗೆ ಅವಳಾ ದನಿಯೇ ಕಾಡೈತೆ,
ನವಿಲಿನ್ಹಾಂಗೆ ಈ ಜೀವ ಬಯಕೆ ಬಿಚ್ಚಿ ಕುಣಿದೈತೆ,
ಕನಸೆಲ್ಲ ಕಮರಿ ಕಣ್ಣು ನಂಜಾಗೈತೆ,
ಅವಳ ಕಣ್ಣಿದಿರಿಗೆ ಕಂಡು ನೋಟ ಬದುಕೈತೆ,
ನಗುವೆಲ್ಲ ಮರೆತು ಎದೆಯು ಬರಡಾಗೈತೆ,
ಅವಳ ಉಸಿರು ಸೋಂಕಿ ಸಂತಸ ಹಸುರಾಗೈತೆ,
ಬಾಯಾರಿ ಬಯ್ಕೆಯೊಂದು ಗಾನವ ಮಾಡೈತೆ,
ಅವಳ ಸುಳಿವಲಿ ದನಿಯು ರಾಗ ಕಲಿತೈತೆ,
ಮೋಹ ಮೈ ಮರೆತು ಚಿಂತೆ ತಂದೈತೆ,
ಅವಳ ಮೌನವೇ ಉತ್ತರವ ನುಡಿದೈತೆ.
ಚಿಮ್ಮ್ಯಾಳೆ ಚೆಲುವ….!
ಮೆರೆದಾಳೇ ರೂಪ…!
ಕಾಡ್ಯಾಳೆ ದನಿಯಾಗಿ…..!
ಕುಣಿದುದು ನಾ ನವಿಲಾಗಿ…!,

Creative Commons Licence
ಮೌನವೇ ಉತ್ತರ by Jayateerth Rede is licensed under a Creative Commons Attribution-NonCommercial-ShareAlike 4.0 International License.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s